ಜಿಲ್ಲಾ ಪಂಚಾಯತ್ ನೇಮಕಾತಿ 2021

ಜಿಲ್ಲಾ ಪಂಚಾಯತ್ ನೇಮಕಾತಿ-  2021

ಬಾಗಲಕೋಟೆ ಜಿಲ್ಲಾ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಿಸಲು ಒಟ್ಟು 17 ತಾಂತ್ರಿಕ ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ 25- ಮಾರ್ಚ್  2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ ವಿವರ:

ಕೃಷಿ ತಾಂತ್ರಿಕ ಸಹಾಯಕರು: 10 ಹುದ್ದೆಗಳು

ತೋಟಗಾರಿಕೆ ತಾಂತ್ರಿಕ ಸಹಾಯಕರು: 5 ಹುದ್ದೆಗಳು

ಅರಣ್ಯ ತಾಂತ್ರಿಕ ಸಹಾಯಕರು: 2 ಹುದ್ದೆಗಳು
ಒಟ್ಟು ಹುದ್ದೆಗಳು: 17

ಉದ್ಯೋಗ ಸ್ಥಳ: ಬಾಗಲಕೋಟೆ ಜಿಲ್ಲೆ

ವಿದ್ಯಾರ್ಹತೆ:
ಈ ಮೇಲೆ ತಿಳಿಸಿದ  ಎಲ್ಲಾ ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು BSc / MSc (Agriculture/ BSc / MSc Horticulture/ BSc / MSc Forestry) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವೇತನ ಶ್ರೇಣಿ:
– ತಾಂತ್ರಿಕ ಸಹಾಯಕರು (ಕೃಷಿ/ತೋಟಗಾರಿಕೆ/ಅರಣ್ಯ) ಹುದ್ದೆಗೆ ಮಾಸಿಕ 24,000/- ರೂಪಾಯಿ ವೇತನವನ್ನು ನೀಡಲಾಗುವುದು. ಪ್ರಯಾಣ ಭತ್ಯೆ ಪ್ರತಿ ಕಿ.ಮಿ ಗೆ ರೂಪಾಯಿ  5 ರಂತೆ ಗರಿಷ್ಠ ಮಾಸಿಕ ಧನ 1500 ನೀಡಲಾಗುವುದು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಜಿಲ್ಲಾ ಪಂಚಾಯತ ಕಾರ್ಯಾಲಯ ಬಾಗಲಕೋಟೆ ಇಲ್ಲಿ  ಕೊಠಡಿ ಸಂಖ್ಯೆ 06 ಇಲ್ಲಿಗೆ ನೇರವಾಗಿ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಪಡೆದುಕೊಂಡು ಸೂಕ್ತ ವಿವರಗಳನ್ನು ಭರ್ತಿ ಮಾಡಿ ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಲ್ಲಿಸಬೇಕು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10 ಮಾರ್ಚ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 ಮಾರ್ಚ್ 2021

ಅಧಿಸೂಚನೆhttp://bit.ly/2WqNSix
ಅಧಿಕೃತ ವೆಬ್ಸೈಟ್http://bit.ly/3BLB5XX

Leave a Reply

Your email address will not be published. Required fields are marked *